ಬಸವ ಸಂಸ್ಕೃತಿಯ ಮೇಲಿನ ದಾಳಿಗೆ ಖಂಡನೆ; ಮುಂದುವರಿದರೆ ರಾಜ್ಯವ್ಯಾಪಿ ಹೋರಾಟದ ಎಚ್ಚರಿಕೆ!
ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ವತಿಯಿಂದ ಬೆಂಗಳೂರಿನ ಬಸವ ಸಮಿತಿಯಲ್ಲಿ ಇಂದು ನಡೆದ ಚಿಂತನ-ಮಂಥನ ಸಭೆಯಲ್ಲಿ ನಾಡಿನ ವಿವಿಧ ಮಠಗಳ ಪೂಜ್ಯ ಸ್ವಾಮೀಜಿಗಳು, ಚಿಂತಕರು ಹಾಗೂ ಸಮಾಜದ ಹಿರಿಯರು ಭಾಗವಹಿಸಿದ್ದರು.
ಸಭೆಯಲ್ಲಿ ಕರ್ನಾಟಕದ ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವಣ್ಣನವರು, ಬಸವಾದಿ ಶರಣರು ಹಾಗೂ ಬಸವ ಸಂಸ್ಕೃತಿಯ ಮೇಲೆ ನಿರಂತರವಾಗಿ ನಡೆಯುತ್ತಿರುವ ದಾಳಿಗಳನ್ನು ತೀವ್ರವಾಗಿ ಖಂಡಿಸಿದರು.
ಇಂತಹ ದಾಳಿಗಳನ್ನು ತಕ್ಷಣವೇ ನಿಲ್ಲಿಸಬೇಕು. ಇಲ್ಲದಿದ್ದರೆ ನಾಡಿನ ಜನರೆಲ್ಲರೂ ಒಂದಾಗಿ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಬಸವ ವಿರೋಧಿ ಶಕ್ತಿಗಳಿಗೆ ಸಭೆಯು ಸರ್ವಾನುಮತದಿಂದ ಕೈಗೊಂಡ ನಿರ್ಣಯದ ಮೂಲಕ ಎಚ್ಚರಿಕೆ ನೀಡಿತು.
ಇಂದಿನ ಸಭೆಯಲ್ಲಿ ಭಾಗವಹಿಸಿದ್ದ ಪರಮಪೂಜ್ಯ ಗುರುಗಳು:
ಶ್ರೀ ಸಿದ್ದಲಿಂಗ ಸ್ವಾಮಿಗಳು (ಸಿದ್ದಗಂಗೆ), ಸಾಣೇಹಳ್ಳಿಯ ಪಂಡಿತಾರಾಧ್ಯ ಶ್ರೀಗಳು, , ಭಾಲ್ಕಿ ಹಿರೇಮಠದ ನಾಡೋಜ ಬಸವಲಿಂಗ ಪಟ್ಟದ್ದೇವರು, ಗದುಗಿನ ತೋಂಟದಾರ್ಯ ಮಠದ ಶ್ರೀ ಸಿದ್ದರಾಮ ಶ್ರೀಗಳು, ಶಿವಮೊಗ್ಗದ ಬೆಕ್ಕಿನ ಕಲ್ಮಠದ ಡಾ. ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಮಹಾಸ್ವಾಮಿಗಳು, ಬೆಂಗಳೂರಿನ ಬೇಲಿಮಠದ ಶ್ರೀ ಶಿವರುದ್ರ ಸ್ವಾಮೀಜಿಗಳು, ಚಿತ್ರದುರ್ಗದ ಮಾದಾರ ಚನ್ನಯ್ಯ ಮಹಾಸ್ವಾಮಿಗಳು, ಭೋವಿ ಮಠದ ಇಮ್ಮಡಿ ಸಿದ್ದರಾಮ ಶ್ರೀಗಳು, ಬಸವಪೀಠದ ಗಂಗಾಮಾತೆ, ಮುರುಘಾಮಠದ ಶ್ರೀ ಬಸವಕುಮಾರ ಸ್ವಾಮೀಜಿಗಳು,ನೆಲಮಂಗಲದ ಪವಾಡ ಬಸವಣ್ಣ ದೇವರಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿಗಳು, ಕುಣಿಗಲ್‌ನ ಬೆಟ್ಟರಹಳ್ಳಿ ಗವಿಮಠದ ಚಂದ್ರಶೇಖರ ಶಿವಾಚಾರ್ಯ ಶ್ರೀಗಳು, ಕನಕಪುರದ ಶ್ರೀದೇಗುಲ ಮಠದ ಶರಣಬಸವ ಚನ್ನಬಸವ ಸ್ವಾಮೀಜಿಗಳು, ಪೂಜ್ಯ ಆಲಮಟ್ಟಿ ಶ್ರೀಗಳು ಹಾಗೂ ಅಥಣಿಯ ಮೋಟಗಿ ಮಠದ ಪ್ರಭು ಚನ್ನಬಸವ ಶ್ರೀಗಳು ಸೇರಿದಂತೆ ಹಲವು ಮಠಗಳ ಪೂಜ್ಯರು ಉಪಸ್ಥಿತರಿದ್ದರು.
ಸಭೆಯಲ್ಲಿ ಭಾಗವಹಿಸಿದ್ದ ಚಿಂತಕರು, ಸಾಹಿತಿಗಳು ಹಾಗೂ ಸಮಾಜದ ಹಿರಿಯರು:
ಶ್ರೀ ಎಲ್. ಹನುಮಂತಯ್ಯ, ಸಾಹಿತಿ ಶ್ರೀ ಎಸ್.ಜಿ. ಸಿದ್ದರಾಮಯ್ಯ, ಶ್ರೀ ಬಸವರಾಜ ಸಬರದ, ಬಸವ ಸಮಿತಿಯ ಶ್ರೀ ಅರವಿಂದ ಜತ್ತಿ, ಹೋರಾಟಗಾರ ಶ್ರೀ ರವಿಕೃಷ್ಣಾ ರೆಡ್ಡಿ, ನಿವೃತ್ತ ಕುಲಪತಿ ಡಾ. ರಾಜಾಸಾಬ್, ಡಾ. ಜಾಣಗೆರೆ ವೆಂಕಟರಾಮಯ್ಯ, ಮಾಜಿ ಮೇಯರ್ ಶ್ರೀಮತಿ ಗಂಗಾಂಬಿಕೆ ಮಲ್ಲಿಕಾರ್ಜುನ ಸೇರಿದಂತೆ ಹಲವು ಗಣ್ಯರು, ಹಿರಿಯರು ಹಾಗೂ ಬಸವಭಕ್ತರು ಸಭೆಯಲ್ಲಿ ಉಪಸ್ಥಿತರಿದ್ದು, ಸರ್ವಾನುಮತದ ನಿರ್ಣಯಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿದರು.
#ಸಾಂಸ್ಕೃತಿಕನಾಯಕ